ಸ್ಕಾ ್ವಷ್: ಶುಭಾರಂಭ
ಗ್ಲಾಸ್ಗೊ: ಭಾರತದ ಭರವಸೆಯ ಸ್ಕ್ವಾಷ್ಪಟುಗಳಾದ ಅನಕಾ ಆಲಂಕಮೊನಿ, ಹರಿಂದರ್ ಪಾಲ್ ಸಂಧು ಮತ್ತು ಮಹೇಶ್ ಮಂಗಾವ್ಕರ್ ಕಾಮನ್ವೆಲ್ತ್ ಕ್ರೀಡಾಕೂಟದ ತಮ್ಮ ಆರಂಭಿಕ ಪಂದ್ಯದಲ್ಲಿ ಗೆಲವು ದಾಖಲಿಸಿದ್ದಾರೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಅನಕಾ ತಮ್ಮ ಎದುರಾಳಿ ಕೀನ್ಯಾದ ಖಲೇಕ ನಿಂಜಿ ವಿರುದ್ಧ 11-2, 11-3, 11-6 ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿದರು. ಈ ಮೂಲಕ ಅಂತಿಮ 32ರ ಘಟ್ಟಕ್ಕೆ ಪ್ರವೇಶಿಸಿದ್ದು, 15ನೇ ಶ್ರೇಯಾಂಕಿತ ಮಲೇಷ್ಯಾದ ಡೆಲಿಯಾ ಆರ್ನೊಲ್ಡ್ ವಿರುದ್ಧ ಸೆಣೆಸಲಿದ್ದಾರೆ. ಭಾರತದ ಪ್ರಮುಖ ಸ್ಕ್ವಾಷ್ ಆಟಗಾರ್ತಿಯರಾದ ದೀಪಿಕಾ ಪಳ್ಳಿಕಲ್ ಹಾಗೂ ಅನುಭವಿ ಆಟಗಾರ್ತಿ ಜೋಷ್ನಾ ಚಿನ್ನಪ್ಪ ಅವರು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು.
ಪುರುಷರ ಸಿಂಗಲ್ಸ್ನಲ್ಲಿ ಮಹೇಶ್ ತಮ್ಮ ಎದುರಾಳಿ ಕೀನ್ಯಾದ ಹರ್ದೀಪ್ ರೀಲ್ ವಿರುದ್ಧ ಗೆಲವು ದಾಖಲಿಸಿದ್ದಾರೆ. ಮಹೇಶ್ ತಮ್ಮ ಮುಂದಿನ ಸುತ್ತಿನಲ್ಲಿ ಇಂಗ್ಲೆಂಡ್ನ ಪೀಟರ್ ಬಾರ್ಕರ್ ವಿರುದ್ಧ ಪ್ರಬಲ ಪೈಪೋಟಿ ಎದುರಿಸಲಿದ್ದಾರೆ. ಹರೀಂದರ್ ಪಾಲ್ ಸಂಧು ತಮ್ಮ ಎದುರಾಳಿ ಉತ್ತರ ಐರ್ಲೆಂಡ್ನ ಮೈಕಲ್ ಕ್ರೇಗ್ ವಿರುದ್ಧ 11-9, 11-5, 11-5 ಅಂತರದ ಗೆಲವು ದಾಖಲಿಸಿದ್ದಾರೆ.